Friday, 1 January 2016

ಮರಭೂಮಿಯಲ್ಲಿಯೂ ಗುಲಾಬಿಯಾಗಿ

18. ಕಾನನದಲಿ ಕೋಗಿಲೆಯಾಗಿ ನಾ ಕೂಗಿರುವೆ
ಕಲ್ಲಿನಲಿ ಪಾಚಿಯಾಗಿ ನಾ ಉದಯಿಸಿರುವೆ
ತೋಟಗಳ ವಿಶ್ವದಲಿ ಕಂಪು ಸೂಸುವರೆ
ಮರಭೂಮಿಯಲ್ಲಿಯೂ ಗುಲಾಬಿಯಾಗಿ ನಾ ಕಂಪ ಸೂಸಿರುವೆ || 

ಎನಿಸದಿರು ಕಳಂಕಿತನೆಂದು

17. ವ್ಯರ್ಥ ಕಳೆಯದಿರು ನೀ ಯೌವನವ ಓ ಗೆಳೆಯ
ಪರಿತಪಿಸದಿರು ಕಳಕೊಂಡ ಆಯುವ ಓ ಗೆಳೆಯ
ಕೆಟ್ಟ ಬೆಳೆಯನು ಕೊಡುವ ಬೀಜವನು ಬಿತ್ತದಿರು ಎಂದೂ
ಎನಿಸದಿರು ಕಳಂಕಿತನೆಂದು ಸಮಾಜದಲಿ ಓ ಗೆಳೆಯ ||

Wednesday, 30 December 2015

ಸ್ವಾರ್ಥ ದಕ್ಕುವುದು

16.ಜಗದ ದಶದಿಕ್ಕುಗಳಲಿ ಸ್ವಾರ್ಥದ ನಿನಾದವಡಗಿದೆ
ಸರ್ವರ ಮನದಲ್ಲೂ ಸ್ವಾರ್ಥದ ಸೊಲ್ಲಡಗಿದೆ
ಸ್ವಾರ್ಥದ ಹಂಬಲವಿದೆ ಪ್ರತಿಯೊಬ್ಬನಲಿ ಓ ಗೆಳೆಯ
ಸ್ವಾರ್ಥ ದಕ್ಕುವುದು ದೈವದಲ್ಲಡಗಿದೆ !!

ಆರೋಗ್ಯವೇ ಇಲ್ಲದಿರೆ

15.ದಾನಕ್ಕೊದಗದ ಸಂಪತ್ತು ಸಂಪತ್ತೇನು
ಶತ್ರುವಿಗೆ ತಡೆಯೊಡ್ಡದ ಶಕ್ತಿ ಶಕ್ತಿಯೇನು
ಪ್ರಾಯೋಗಿಕಾವಲ್ಲದ ವಿದ್ಯೆ ನಿರುಪಯುಕ್ತ
ಆರೋಗ್ಯವೇ ಇಲ್ಲದಿರೆ ಬಂತು ಸುಖವೇನು ? !!

ಕುಲೀನನಿಂದ ಕುಲಹೀನನೆನ್ದು

14.ಹೊಳೆವ ಹರಳು ನಕ್ಷತ್ರಗಳಾಗಬಹುದೇ
ಮೋಡಗಳು ಬೆಂಕಿಯ ಮಳೆಗರಿಯಬಹುದೇ
ಕುಲೀನನಿಂದ ಕುಲಹೀನನೆನ್ದು ಜನಿಸನು
ಚಿಪ್ಪಿನಿಂದ ಗೆಡ್ಡೆಗೆಣಸು ಹೊರಬರಹುದೇ !!

ಮಾನವನ ಬದುಕು

13.ಅನುವಂಶೀಯ ದೋಷವೋ, ಸ್ವಭಾವದ ತಪ್ಪೋ
ಇಲ್ಲವೇ ವಿಷಗಳಿಗೆಯ ವಿಷಮ ಪರಿಸರದ್ದೋ
ಈ ಮೂರರಲ್ಲಿಯೇ ಅಡಗಿದೆ ಮಾನವನ ಬದುಕು
ಕೆದಕಿದ್ದಾರೆ ಕೆಡಕು, ಒಳಿತಿದ್ದರೆ ಒಳಿತು !!

ಒಳಿತು-ಕೆಡಕುಗಳ

ಒಳಿತು-ಕೆಡಕುಗಳ ಪರಕಿಸುವನು ಜಾಣ
ಭೇದ ಇವುಗಳನೆಂತು ಪೇಳುವನು ಕೋನ
ಓ ಗೆಳೆಯನೇ ! ಬೆಕ್ಕಿನಲ್ಲಿ ಎಲ್ಲಿಹುದು ಹಂಸದ ಹಿರಿಮೆ
ನೀರನ್ನು - ಹಾಲನ್ನು ಬೇರ್ಪಡಿಸುವ ಗುಣ ||